Articles Category

Karnataka Government Schemes For Agriculture : ರೈತರ ಬೆಳೆ ವಿಮೆ ಪರಿಹಾರ ಹಣ ಜಮೆ:  ನಿಮ್ಮ ಅಕೌಂಟ್ ಗೂ ಹಣ ಬಂದಿದೆಯೇ ಎನ್ನುವುದನ್ನ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಬೆಳೆ ವಿಮೆ ಕರ್ನಾಟಕ ಸರಕಾರ

Karnataka government schemes for agriculture : ರೈತರ ಬೆಳೆ ವಿಮೆ ಪರಿಹಾರ ಹಣ ಜಮೆ:  ನಿಮ್ಮ ಅಕೌಂಟ್ ಗೂ ಹಣ ಬಂದಿದೆಯೇ ಎನ್ನುವುದನ್ನ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Government Schemes For Agriculture 2021-22ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರಲ್ಲಿ, ಸುಮಾರು 50489 ರೈತರಿಗೆ ಬೆಳೆ ವಿಮೆ ಪರಿಹಾರ ಹಣವನ್ನು ಪಾವತಿಸಲಾಗಿದೆ.  ಉಳಿದ ಬೆಳೆ ವಿಮೆ ಮೊತ್ತವನ್ನು ಸರಿಯಾಗಿ ವಿತರಣೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ರೈತರ ಹಿತಕ್ಕಾಗಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಅಂತಹ ಯೋಜನೆಗಳಲ್ಲಿ ಪ್ರಮುಖವಾದದ್ದು, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ. ಈ ಯೋಜನೆಯಡಿಯಲ್ಲಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ 2021-22 ರ ಹಂಗಾಮಿನಲ್ಲಿ ಒಟ್ಟು 5612.14 ಲಕ್ಷ ಬೆಳೆ ವಿಮೆ ಪರಿಹಾರ ಮೊತ್ತವನ್ನು 51099 ಅರ್ಹ ರೈತರಿಗೆ ವಿತರಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 55.37 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ಮೊತ್ತವನ್ನು 50.489 ರೈತರಿಗೆ ವಿಮಾ ಸಂಸ್ಥೆಯವರಿಂದ ಇತ್ಯರ್ಥಪಡಿಸಲಾಗಿದೆ. ಉಳಿದ 74.56 ಲಕ್ಷ ರೂಪಾಯಿ ಬೆಳೆವಿಮೆ ಪರಿಹಾರ ಮೊತ್ತವನ್ನು 610 ರೈತರಿಗೆ ಇತ್ಯರ್ಥಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ 66079 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದ್ದರು. ಈ ರೈತರಿಗೆ 5461.98 ಲಕ್ಷ ರೂಪಾಯಿ ಬೆಳೆ ವಿಮೆ ಪರಿಹಾರ ಹಣ ಲೆಕ್ಕಾಚಾರ ಮಾಡಲಾಗಿದೆ. ಇದರಲ್ಲಿ 49891 ರೈತರಿಗೆ 5394.21 ರೈತರಿಗೆ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಲಾಗಿದೆ. ಇನ್ನೂ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಿಸಿದ 594 ರೈತರಿಗೆ 67.77 ಲಕ್ಷ ರೂಪಾಯಿ ಮೊತ್ತವನ್ನು ಇತ್ಯರ್ಥಪಡಿಸಲಾಗುವುದು.

ಹಿಂಗಾರು ಹಂಗಾಮಿಗೆ 737 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದ್ದರು. ಇದರಲ್ಲಿ 614 ರೈತರಿಗೆ 1.50 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ಹಣ ನೀಡಲು ಲೆಕ್ಕಾಚಾರ ಮಾಡಲಾಗಿದೆ. ಇದರಲ್ಲಿ 598 ರೈತರು 1.43 ಕೋಟಿ ರೂಪಾಯಿ ಹಣವನ್ನು ಬೆಳೆ ವಿಮೆ ಪರಿಹಾರ ಹಣ ನೀಡಲಾಗಿದೆ. ಇನ್ನೂ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ 16 ರೈತರಿಗೆ  6.79 ಲಕ್ಷ ರೂಪಾಯಿ ರೈತರಿಗೆ ಬೆಳೆ ವಿಮೆ ಪರಿಹಾರ ಹಣ ಇತ್ಯರ್ಥಪಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳೆ ವಿಮೆ ಪರಿಹಾರ ನಿಮಗೆ ಬಂದಿದೆಯೇ ಎಂದು ತಿಳಿಯುವುದು ಹೇಗೆ ಎನ್ನುವ ಅನುಮಾನ ನಿಮಗೆ ಮೂಡಬಹುದು. ಇದಕ್ಕೆ ಪರಿಹಾರ ಇಲ್ಲಿದೆ ನೋಡಿ.  2021-22ನೇ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಮುಂಗಾರು ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ವಿಮೆ ಮಾಡಿಸಿದ ರೈತರು, ಅಕೌಂಟ್ ಗೆ ಹಣ ಜಮೆಯಾಗಿದೆಯೇ ಇಲ್ಲವೇ ಎನ್ನುವುದನ್ನು ತಮ್ಮ ಮೊಬೈಲ್ ನಲ್ಲೇ ಪರಿಶೀಲಿಸಬಹುದು.

https://www.samrakshane.karnataka.gov.in/Premium/CheckStatusMain_aadhaar.aspx

ಬೆಳೆ ವಿಮೆ ಪರಿಹಾರ ಹಣ ಸ್ಟೇಟಸ್ ಚೆಕ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ಮೊಬೈಲ್ ನಂಬರ್ ಆಯ್ಕೆ ಮಾಡಿ, ತಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ಕಾಣುವ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು. Search ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಜಮೆಯಾಗಿರುವ ಮಾಹಿತಿ ಕಾಣುತ್ತದೆ.

ಒಂದು ವೇಳೆ ನೀವು ಬೆಳೆ ವಿಮೆ ಮಾಡಿಸಿದ ನಂತರವೂ ನಿಮಗೆ ಬೆಳೆ ವಿಮೆ ಜಮೆಯಾಗಿರದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಇದಕ್ಕೆ ಪರಿಹಾರ ಹೀಗಿದೆ, ರೈತರು ಯಾವ ಬೆಳೆ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರೋ ಆ ಕಂಪನಿಯ ಸಿಬ್ಬಂದಿಗೆ ಕರೆ ಮಾಡಿ ವಿಚಾರಿಸಬಹುದು. ನಿಮಗೆ ವಿಮಾ ಕಂಪನಿ ಸಿಬ್ಬಂದಿಯ ಮೊಬೈಲ್ ನಂಬರ್ ಗೊತ್ತಿರದಿದ್ದರೆ 1800 180 1551 ಗೆ ಕರೆ ಮಾಡಿ ವಿಚಾರಿಸಬಹುದು. ಇದು ಉಚಿತ ಸಹಾವಾಣಿಯಾಗಿದೆ, ಉಚಿತ ಸಹಾಯವಾಣಿಗೆ ಕರೆ ಮಾಡಿದ ನಂತರ ರೈತರಿಗೆ ಆಯಾ ಜಿಲ್ಲೆಯ ವಿಮಾ ಕಂಪನಿಯ ಸಿಬ್ಬಂದಿ ಮೊಬೈಲ್ ನಂಬರ್ ನೀಡುವ ವ್ಯವಸ್ಥೆ ಮಾಡುತ್ತಾರೆ.

ಇದ್ದನ್ನು ಓದಿ – ರೈತರ ಆತ್ಮಹತ್ಯೆ ಕಾರಣಗಳು : Reasons For Indian Farmer Suicide

ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ

Leave a Reply

Your email address will not be published. Required fields are marked *