ಕೃಷಿ ಇಲಾಖೆ ಅನುಷ್ಠಾನಗೊಳಿಸಿರುವ ಬಿತ್ತನೆ ಬೀಜ ವಿತರಣೆ, ಸಸ್ಯ ಸಂರಕ್ಷಣೆ, ಮಣ್ಣಿನ ಸತ್ವ ಹೆಚ್ಚಿಸುವಿಕೆ ಕಾರ್ಯಕ್ರಮಗಳ ಮಾಹಿತಿ:
1)ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮದ ವಿವರಣೆ:
ಎಲ್ಲಾ ವರ್ಗದ ರೈತರು ತಮ್ಮ ಮುಖ್ಯ ಬೆಳೆಗೆ ಅಗತ್ಯವಿರುವ ಹೈಬ್ರಿಡ್, ಅಧಿಕ ಇಳುವರಿ ತಳಿಗಳು ಮತ್ತು ದೇಸಿ ತಳಿಗಳ, ಪ್ರಮಾಣಿತ ಹಾಗೂ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಮುಂಗಾರು ಮತ್ತು ಹಿಂಗಾರು ಬೇಸಿಗೆ ಹಂಗಾಮುಗಳಲ್ಲಿ ರಿಯಾಯಿತಿ ದರದಲ್ಲಿ, ಎಂದರೆ ಸಾಮಾನ್ಯ ವರ್ಗದವರಿಗೆ 50% ರಿಯಾಯಿತಿ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ 75% ರಿಯಾಯಿತಿ ದರದಲ್ಲಿ, ಸಕಾಲದಲ್ಲಿ ರೈತರಿಗೆ ಒದಗಿಸುವ ಮೂಲಕ ಅಧಿಕ ಇಳುವರಿ ಪಡೆಯಲು ಕೃಷಿ ಇಲಾಖೆ ನೆರವಾಗುತ್ತಿದೆ.
2)ಸಸ್ಯ ಸಂರಕ್ಷಣಾ ಕಾರ್ಯಕ್ರಮ:
ರೈತರಿಗೆ ತಮ್ಮ ಬೆಳೆಗಳನ್ನು ಬಾಧಿಸುವ ಕೀಟಗಳು, ರೋಗಗಳು ಹಾಗೂ ಬೆಳೆಗೆ ಮಾರಕವಾಗಿರುವ ಕಳೆ ನಿರ್ವಹಣೆ, ಮುಂತಾದ ಸಮಸ್ಯೆಗಳ ಪರಿಹಾರಕ್ಕಾಗಿ ರೈತರಿಗೆ ಮಾಹಿತಿ ಒದಗಿಸುವುದು. ಹಾಗೂ ತುರ್ತು ಸಸ್ಯ ಸಂರಕ್ಷಣಾ ಕಾರ್ಯ ಕೈಗೊಳ್ಳಲು ರೈತರಿಗೆ ಶೇ. 50 ರಷ್ಟು ರಿಯಾಯಿತಿ ದರದಲ್ಲಿ ಈ ಕೆಳಗೆ ಪಟ್ಟಿ ಮಾಡಿರುವ ಪರಿಕರಗಳನ್ನು ಒದಗಿಸಲಾಗುತ್ತದೆ.
- ಜೈವಿಕ ಕೀಟನಾಶಕ ಮತ್ತು ಜೈವಿಕ ನಿಯಂತ್ರಣಕಾರಕಗಳ ವಿತರಣೆ.
- ಅವಶ್ಯಕತೆಗೆ ಅನುಗುಣವಾಗಿ ಬೆಳೆಯನ್ನು ಭಾದಿಸುವ ಕೀಟಗಳು ಹಾಗೂ ರೋಗ ನಿರ್ವಹಣೆಗೆ ಪೀಡೆನಾಶಕಗಳ ವಿತರಣೆ.
- ಬೀಜೋಪಚಾರ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ತರಬೇತಿ ನೀಡುವಿಕೆ ಹಾಗೂ ಆಂದೋಲನ ಕಾರ್ಯಕ್ರಮ ಕೈಗೊಳ್ಳುವುದು.
3)ಮಣ್ಣಿನ ಸತ್ವ ಹೆಚ್ಚಿಸುವಿಕೆ ಕಾರ್ಯಕ್ರಮ:
ಕೃಷಿ ಭೂಮಿಯಲ್ಲಿ ಸುಧಾರಣೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಹಾಗೂ ರೈತರ ಆರ್ಥಿಕ ಮಟ್ಟ ಸುಧಾರಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಈ ಯೋಜನೆಯಡಿಯಲ್ಲಿ ಕೃಷಿಗೆ ಸಂಬಂಧಿತ ವಸ್ತುಗಳು, ಎಂದರೆ ಹಸಿರೆಲೆ ಗೊಬ್ಬರ, ಬೀಜ, ಜಿಪ್ಸಂ ಅಥವಾ ಕೃಷಿ ಸುಣ್ಣ ಅಥವಾ ಡೋಲೋಮೈಟ್, ಲಘು ಪೋಷಕಾಂಶಗಳ, ಎರೆ ಹುಳುಗೊಬ್ಬರ, ಸಿಟಿ ಕಾಂಪೋಸ್ಟ್, ಸಾವಯವ ಗೊಬ್ಬರ(ಆರ್ಗಾನಿಕ್ ಮೆನ್ಯೂರ್), ರಂಜಕಯುಕ್ತ ಸಾವಯವ ಗೊಬ್ಬರ (PROM), ಖಾದ್ಯವಲ್ಲದ ಎಣ್ಣೆ ರಹಿತ ಹಿಂಡಿ ಗೊಬ್ಬರಗಳನ್ನು, ಸಾಮಾನ್ಯ ವರ್ಗದ ರೈತರಿಗೆ 50% ರಿಯಾಯಿತಿ ದರದಲ್ಲಿ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ 75% ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ.
ಇದನ್ನು ಓದಿ… Pradhan Mantri Fasal Bhima Yojana – ರೈತರಿಗೆ ವರದಾನವಾಗಿರುವ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಯ ಬಗ್ಗೆ ಮಾಹಿತಿ.
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ