Articles Category

ರೈತರಿಗೆ ಸಂತಸದಸುದ್ದಿ: ಕರ್ನಾಟಕ ಹಾಲು ಒಕ್ಕೂಟದಿಂದ ಘೋಷಣೆ : ಇಲ್ಲಿದೆ ಸಂಪೂರ್ಣ ಮಾಹಿತಿ .

karnataka Milk Federation

KMF ರೈತರಿಗೆ ಸಂತಸದ ಸುದ್ದಿ: ಕರ್ನಾಟಕ ಹಾಲು ಒಕ್ಕೂಟದಿಂದ ಘೋಷಣೆ.

ಇತ್ತೀಚಿಗೆ ಕರ್ನಾಟಕ ಹಾಲು ಒಕ್ಕೂಟ (KMF) ಒಂದು ಮಹತ್ವವಾದ ಘೋಷಣೆ ಮಾಡಿದ್ದು, ನಂದಿನಿ ಹಾಲಿನ ದರವನ್ನು ಸುಮಾರು 3 ರೂಪಾಯಿ ಗಳಷ್ಟು ಹೆಚ್ಚಿಸಿದೆ. ಈ ಘೋಷಣೆಯನ್ನು ನವೆಂಬರ್ 15 ರಿಂದ ಜಾರಿಗೆ ತರಲಾಗಿದೆ ಎಂದು ಕೆಎಂಎಫ್ (Karnataka Milk Federation) ತಿಳಿಸಿತ್ತು. ಬರೋಬ್ಬರಿ ಮೂರು ವರ್ಷಗಳ ನಂತರ ಹಾಲಿನ ದರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಪರಿಷ್ಕೃತ ದರದ ಪ್ರಕಾರ, ಒಂದು ಲೀಟರ್ ನಂದಿನಿ ಟೋನ್ಡ್ ಹಾಲಿಗೆ ಮೊದಲಿನ 37 ರೂ. ಬದಲಾಗಿ 40 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಈ ಹಾಲಿನ ದರ ಬದಲಾವಣೆಯನ್ನು ಸಮರ್ಥಿಸಿಕೊಂಡ ಕೆಎಂಎಫ್ ಅಧ್ಯಕ್ಷರು, “ರೈತರಿಂದ ಡೈರಿಗೆ ಹಾಲಿನ ಒಳಹರಿವು ದೊಡ್ಡ ಮಟ್ಟದಲ್ಲಿ ಕಡಿಮೆಯಾಗುತ್ತಾ ಬಂದಿದ್ದು, ಕಳೆದ ಕೆಲವು ತಿಂಗಳುಗಳಿಂದ ಆಗುತ್ತಿರುವ ಅಕಾಲಿಕ ಮಳೆ, ಹವಾಮಾನ ವೈಪರೀತ್ಯಗಳು,  ಗಡ್ಡೆ ಚರ್ಮ ರೋಗ ಮತ್ತು ಕಾಲು ಬಾಯಿ ರೋಗಗಳಂತಹ ವಿಷಯಗಳು ಹಾಲಿನ ಉತ್ಪಾದನೆಯ ಮೇಲೆ ತೀವ್ರವಾದ ಪರಿಣಾಮ ಬೀರುತ್ತಿವೆ. ಇನ್ನು, 2022 ರ ಜೂನ್ ತಿಂಗಳಿನಲ್ಲಿ ಪ್ರತಿದಿನಕ್ಕೆ 94.20 ಲಕ್ಷ ಲೀಟರ್ ಹಾಲಿನ ಉತ್ಪಾದನೆಯಿತ್ತು, ಆದರೆ ಈಗ ಪ್ರತಿದಿನಕ್ಕೆ 78.80 ಲಕ್ಷ ಲೀಟರ್‌ ಗೆ ಇಳಿಕೆಯಾಗಿದೆ. ಇದರ ಜೊತೆಗೆ ಇತರೆ ಎಲ್ಲಾ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ವೆಚ್ಚಗಳು ಕೂಡ 20 ರಿಂದ 35 ಶೇಖಡಾದಷ್ಟು ಏರಿಕೆಯಾಗಿದೆ. ಇದರಿಂದ, ಎಲ್ಲಾ ಹಾಲಿನ ಒಕ್ಕೂಟ ಸಂಘಗಳು ತೀವ್ರ ನಷ್ಟಕ್ಕೆ ಈಡಾಗಿತ್ತು. ಈ ಕಾರಣದಿಂದ, ಹಾಲಿನ ದರ ಬದಲಾವಣೆಯು ಅನಿವಾರ್ಯವಾಗಿತ್ತು” ಎಂದು ಹೇಳಿದರು.

ನಂದಿನಿ ಹಾಲಿನ ನೂತನ ಬೆಲೆ ಕಾರ್ಡ್ ನ್ನು ಪ್ರಕಟಿಸಿದ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷರು, “ಖಾಸಗಿ ಡೈರಿಗಳು ಮತ್ತು ಇತರ ಜನಪ್ರಿಯ ಹಾಲು ಒಕ್ಕೂಟದ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಹಾಲಿನ ಪರಿಷ್ಕೃತ ದರಗಳು ಮಾರುಕಟ್ಟೆಯಲ್ಲಿ ಇನ್ನೂ ಕಡಿಮೆಯಾಗಿದೆ. ಈ ದರ ಪರಿಷ್ಕರಣೆಯನ್ನು ರೈತರ ಹಿತದೃಷ್ಟಿಯಿಂದ ಮಾಡಲಾಗಿದ್ದು, ಪರಿಷ್ಕೃತವಾದ ಈ ಬೆಲೆಯನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುವುದು. ಇದರಿಂದ ಕೆಎಂಎಫ್‌ಗೆ ಯಾವುದೇ ಲಾಭವಾಗುವುದಿಲ್ಲ” ಎಂದು ಹೇಳಿದರು.

ಡ್ರ್ಯಾಗನ್ ಕೃಷಿಯಲ್ಲಿ ಯಶಸ್ಸು ಕಂಡ ಎಂಬಿಎ ಪದವೀಧರನ ಯಶೋಗಾಥೆ

ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ

    

Leave a Reply

Your email address will not be published. Required fields are marked *