ಸರ್ವೆ ನಂಬರ್ ಮೂಲಕ ನಿಮಗೆ ಬರುವ ಬೆಳೆ ವಿಮೆ ಎಷ್ಟು ಎಂದು ಪರಿಶೀಲಿಸಬಹುದು
ಬೆಳೆ ವಿಮೆ: ಮೊದಲಿಗೆ ವಿಮೆ ಎಂದರೇನು ಎನ್ನುವುದನ್ನು ನೋಡುವುದಾದರೆ, ಬೆಳೆ ವಿಮೆ ಎನ್ನುವುದು ಗ್ರಾಮೀಣ ವಿಮೆಯಲ್ಲಿ ಪ್ರಮುಖವಾದದ್ದು. ಇದರಲ್ಲಿ ಉತ್ಪನ್ನ, ಬೆಳೆಯ ಬೆಲೆ ಮತ್ತು ಆದಾಯದ ಬಗ್ಗೆ ತಿಳಿಸಲಾಗುತ್ತದೆ. ರಾಜ್ಯದ ರೈತರು ಗುಣಮಟ್ಟ ಪ್ರಮಾಣದ ಉತ್ಪನ್ನವನ್ನು ಪಡೆಯಲು ಬಯಸಿದರೆ, ಕೃಷಿ ಭೂಮಿಯ ಪೋಷಣೆ ಹಾಗೂ ಬೆಳೆಗಾಗಿ ಅಗತ್ಯವಿರುವ ಆರ್ಥಿಕ ಸಮಸ್ಯೆಗಳನ್ನು, ಬೆಳೆ ವಿಮೆ ಅಡಿಯಲ್ಲಿ ವಿಮೆ ಕಂಪನಿಗಳು ಪರಿಹರಿಸುತ್ತವೆ. ಸಾಮಾನ್ಯವಾಗಿ, ರೈತರು, ಕ್ಷೀರ ಉತ್ಪಾದಕರು ಎಂದರೆ ಹೈನುಗಾರಿಕೆಯನ್ನು ನಡೆಸುವವರು, ಆಲಿಕಲ್ಲು, ಬರ ಮತ್ತು ಪ್ರವಾಹ ಮುಂತಾದ ಪ್ರಾಕೃತಿಕ ವಿಕೋಪಗಳ ಕಾರಣದಿಂದ ತಮ್ಮ ಬೆಳೆಗಳ ನಷ್ಟವನ್ನು ಅನುಭವಿಸಿದ ಕೃಷಿಕರು ಮತ್ತು ಕೃಷಿ ಉತ್ಪನ್ನಗಳ ಬೆಲೆ ಕುಸಿತ ಮುಂತಾದ ಆದಾಯದ ನಷ್ಟದಿಂದ ರಕ್ಷಿಸಿಕೊಳ್ಳಲು ಬೆಳೆ ವಿಮೆಯನ್ನು ಬಳಸಿಕೊಳ್ಳಬಹುದು.
ಕೆಲವು ವರ್ಷದ ಹಿಂದೆ, ಒಳಹರಿವುಗಳು, ನಿರೀಕ್ಷಿಸಲಾದ ಉತ್ಪನ್ನಗಳು ಮತ್ತು ಭೂ-ಮಾಲೀಕತ್ವದ ಇಳುವರಿಯ ದಾಖಲೆಗಳಲ್ಲಿರುವ ಸಮಸ್ಯೆಗಳ ಕಾರಣದಿಂದ, ವಿಮೆ ಕಂಪನಿಗಳು ಬೆಳೆ ವಿಮೆಯನ್ನು ಬಿಡುಗಡೆ ಮಾಡಿರಲಿಲ್ಲ. ಜಮೀನಿನ ತೊಂದರೆ, ವಿವಿಧ ಬೆಳೆಗಳು, ಏಕಕಾಲಿಕ ಕೊಯ್ಲು, ಸಣ್ಣ ಕಂತುಗಳು ಮತ್ತು ಕಾರ್ಮಿಕ ದರ ಮತ್ತು ಒಳಹರಿವುಗಳ ವೆಚ್ಚ ಮುಂತಾದವುಗಳ ದಾಖಲೆಗಳನ್ನು ಒದಗಿಸುವ ಮೂಲಕ ವಿಮೆಗಾರರು ಬೆಳೆ ವಿಮೆ ಮಾಡಿಸುವುದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಹಾಗಾದರೆ, ಸರ್ವೆ ನಂಬರ್ ಹಾಕುವ ಮೂಲಕ ಬೆಳೆ ವಿಮೆ ಚೆಕ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಯೋಣ:
ಮೊದಲು ಈ ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ:
ನಂತರ 2022-23 ವರ್ಷವನ್ನು ಆಯ್ಕೆ ಮಾಡಿ. ಮತ್ತು ಋತು ಆಯ್ಕೆಯಲ್ಲಿ, kharif / Rabi / summer ಎಂದು ಆಯ್ಕೆ ಮಾಡಿ, ಮುಂದೆ ಗೋ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಫಾರ್ಮರ್ ಕಾಲಂನಲ್ಲಿ “Crop insurance details on survey number” ಆಯ್ಕೆಯ ಮೇಲೆ ಕ್ಲಿಕ್ಕಿಸಿ. ನಂತರ ನಿಮ್ಮ ಜಿಲ್ಲೆ, ತಾಲೂಕು, ಹೊಬಳಿ ಮತ್ತು ಗ್ರಾಮವನ್ನು ಸರಿಯಾಗಿ ಆಯ್ಕೆ ಮಾಡಿ. ಸರ್ವೇ ನಂಬರ್ ನ್ನು ದಾಖಲಿಸಿ, ನಂತರ “ಸರ್ಚ್” ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಸರ್ವೆ ನಂಬರ್ ನಲ್ಲಿ ಬರುವ ಎಲ್ಲಾ ಹಿಸ್ಸಾ ಮಾಹಿತಿ ದೊರೆಯುತ್ತದೆ. ನಂತರ ನಿಮ್ಮ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿದರೆ, ನೀವು ಬೆಳೆವಿಮೆ ಕಟ್ಟಿರುವ ಬಗ್ಗೆ ಖಚಿತಪಡಿಸಿಕೊಂಡು ಸಂಪೂರ್ಣ ಮಾಹಿತಿ ಪಡೆಯಬಹುದು. ನಂತರ “ಅಪ್ಲಿಕೇಶನ್ ನಂಬರ್” ಮೇಲೆ ಕ್ಲಿಕ್ ಮಾಡಿದರೆ, ನೀವು ಎಷ್ಟು ಬೆಳೆವಿಮೆ ಕಟ್ಟಿದ್ದೀರಿ, ನಿಮಗೆ ಎಷ್ಟು ಬೆಳೆವಿಮೆ ದೊರೆಯಲಿದೆ ಎಂಬಸಂಪೂರ್ಣ ಮಾಹಿತಿ ದೊರೆಯುತ್ತದೆ.
ಇದನ್ನು ಓದಿ… ಕೃಷಿ ಇಲಾಖೆ ಅನುಷ್ಠಾನಗೊಳಿಸಿರುವ ಬಿತ್ತನೆ ಬೀಜ ವಿತರಣೆ, ಸಸ್ಯ ಸಂರಕ್ಷಣೆ, ಮಣ್ಣಿನ ಸತ್ವ ಹೆಚ್ಚಿಸುವಿಕೆ ಕಾರ್ಯಕ್ರಮಗಳ ಮಾಹಿತಿ:
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ