ಅಡಿಕೆ ಬೆಳೆ ಅನುದಾನ : ಅಡಿಕೆಯನ್ನು ಭಾದಿಸುವ ಎಲೆ ಚುಕ್ಕೆರೋಗ ತಡೆಗೆ 10 ಕೋಟಿ ರೂ. ಅನುದಾನ ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿರೋಗ ಭಾಧಿಸಿತ್ತು, ಇದರಿಂದ ಅಡಿಕೆ ಬೆಳೆದ ಸಾವಿರಾರು ರೈತರು ಕಂಗಾಲಾಗಿದ್ದರು. ಈಗಾಗಲೇ, ಅಡಿಕೆ ಮರಗಳಿಗೆ ಕಾಣಿಸಿಕೊಂಡಿದ್ದ ಚುಕ್ಕೆ ರೋಗ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಂಡಿವೆ. ಕೇಂದ್ರ ಸರ್ಕಾರವು ಅಡಿಕೆಯನ್ನು ಕಾಡುತ್ತಿರುವ ಈ ರೋಗದ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ತಜ್ಞರ ಸಮಿತಿಯನ್ನು ರಚಿಸಿದೆ.
ಕೇಂದ್ರ ಸರ್ಕಾರ ರಚನೆ ಮಾಡಿರುವ ಈ ಸಮಿತಿಯಲ್ಲಿ, ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಸದಸ್ಯರು, ಭಾರತೀಯ ಕೃಷಿ ವಿಜ್ಞಾನ ಪರಿಷತ್ನ ನಿರ್ದೇಶಕಿಯಾಗಿರುವ ಅನಿತಾ ಕರುಣ್, ಕಲ್ಲಿಕೋಟೆಯ ಅಡಿಕೆ ಮತ್ತು ಮಸಾಲೆ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕರಾದ ಹನಿ ಚೆರಿಯನ್ ಹಾಗೂ ಉಪ ನಿರ್ದೇಶಕರಾದ ಫೆಮಿನಾ, ಸಿಪಿಸಿಆರ್ಐ ಬೆಳೆ ಉತ್ಪಾದನಾ ವಿಭಾಗದ ಮುಖ್ಯಸ್ಥರಾದ ರವಿ ಭಟ್, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಎಂ.ವಾಲಿ, ತೋಟಗಾರಿಕೆ ಇಲಾಖೆ ದಕ್ಷಿಣ ಕನ್ನಡದ ಉಪನಿರ್ದೇಶಕರಾದ ಎಚ್.ಆರ್.ನಾಯ್ಕ್, ಸಿಪಿಸಿಆರ್ಐನ ಬೆಳೆ ಸಂರಕ್ಷಣಾ ವಿಭಾಗದ ಮುಖ್ಯಸ್ಥರಾದ ವಿನಾಯಕ ಹೆಗಡೆ ಸೇರಿದ್ದಾರೆ.
ಇದೀಗ, ರಾಜ್ಯ ಸರ್ಕಾರವೂ ಈ ತೊಂದರೆ ನಿವಾರಣೆಗಾಗಿ ಕ್ರಮ ಕೈಗೊಳ್ಳುತ್ತಿದೆ. ಈ ರೋಗದ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ, ಅಡಿಕೆ ಬೆಳೆಯನ್ನು ಪೀಡಿಸುತ್ತಿರುವ ಈ ರೋಗವನ್ನ ತಡೆಯುವ ನಿಟ್ಟಿನಲ್ಲಿ ಬೇಕಾಗಿರುವ ಅಗತ್ಯ ಔಷಧಿಯನ್ನು ಖರೀದಿಸಲು ತುರ್ತಾಗಿ 10 ಕೋಟಿ ರೂ. ಮೊತ್ತದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಲು ಸೂಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನು ಓದಿ… ರೈತರಿಗೆ ಸಿಹಿಸುದ್ದಿ : ಬ್ಯಾಂಕ್ ಗಳು ರೈತರ ಆಸ್ತಿ ಜಪ್ತಿ ಮಾಡುವಂತಿಲ್ಲ, ಮರುಪಾವತಿಗೆ ಸಮಯಾವಕಾಶ ನೀಡಬೇಕು.
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ